ಕಂಬಾದ್ರಿ ಎಂಟರ್ಟೈಮೆಂಟ್ ಲಾಂಛನದಲ್ಲಿ ಸ್ವಾಗತ್ ಗೌಡ ಅವರು ನಿರ್ಮಿಸುತ್ತಿರುವ ‘ಡೇಂಜರ್ ಜೋನ್‘ ಚಿತ್ರಕ್ಕೆ ಬಹುತೇಕ ಚಿತ್ರೀಕರಣ ಪೂರ್ಣವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಕುಶಾಲನಗರ, ಮಲ್ಲಳ್ಳಿ ಫ಼ಾಲ್ಸ್, ಹಾರಂಗಿ ಬ್ಯಾಕ್ ವಾಟರ್, ಸಕಲೇಶಪುರ ಮುಂತಾದ ಕಡೆ ೪೦ ದಿನಗಳ ಚಿತ್ರೀಕರಣ ನಡೆದಿದೆ.
ಈ ಕುತೂಹಲಕಾರಿ ಚಿತ್ರ ಜನರ ಪ್ರಶಂಸೆಗೆ ಪಾತ್ರವಾಗಲಿದೆ ಎಂದು ನಿರ್ದೇಶಕ ದೇವರಾಜ್ಕುಮಾರ್ ತಿಳಿಸಿದ್ದಾರೆ. ಮೂರ್ತಿವೀನಸ್ ಛಾಯಾಗ್ರಹಣ, ಸತೀಶ್ ಆರ್ಯನ್ ಸಂಗೀತ ನಿರ್ದೇಶನ, ಅಕ್ಷಯ್ ಪಿ ರಾವ್ ಸಂಕಲನ, ಸೀನು ಕಲಾ ನಿರ್ದೇಶನ ಹಾಗೂ ತ್ರಿಭುವನ್, ಧನ್ಕುಮಾರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ರೂಪ್ಶೆಟ್ಟಿ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ರಮ್ಯ.